೧. ಎಲ್ಲಾ ಸತ್ಯವಿದ್ಯೆಗಳಿಗೂ ಮತ್ತು ಪದಾರ್ಥ ವಿದ್ಯೆಯಿಂದ ತಿಳಿಯಲ್ಪಡುವ ಸರ್ವಕ್ಕೂ ಪರಮಾತ್ಮನೇ ಆದಿಮೂಲನು.
೨. ಪರಮಾತ್ಮನು ಸಚ್ಚಿದಾನಂದ ಸ್ವರೂಪನೂ, ನಿರಾಕಾರನೂ, ಸರ್ವಶಕ್ತನೂ, ನ್ಯಾಯಕಾರಿಯೂ, ದಯಾಳುವೂ, ಅಜನ್ಮನೂ, ಅನಂತನೂ, ನಿರ್ವಿಕಾರನೂ, ಅನಾದಿಯೂ, ಅನುಪಮನೂ, ಸರ್ವಾಧಾರನೂ, ಸರ್ವೇಶ್ವರನೂ, ಅಜರನೂ, ಸರ್ವಾಂತರ್ಯಾಮಿಯೂ, ಅಮರನೂ, ಅಭಯನೂ, ನಿತ್ಯನೂ, ಪವಿತ್ರನೂ, ಸೃಷ್ಟಿಕರ್ತನೂ ಆಗಿದ್ದಾನೆ. ಕೇವಲ ಅವನ ಉಪಾಸನೆಯನ್ನು ಮಾಡುವುದು ಯೋಗ್ಯ.
೩. ವೇದವು ಸಮಸ್ತ ಸತ್ಯವಿದ್ಯೆಗಳ ಪುಸ್ತಕವು. ಅವುಗಳನ್ನು ಓದುವುದೂ, ಓದಿಸುವುದೂ, ಕೇಳುವುದೂ, ಹೇಳುವುದೂ ಆರ್ಯರೆಲ್ಲರ ಪರಮ ಧರ್ಮ.
೪. ಸತ್ಯವನ್ನು ಗ್ರಹಿಸುವುದಕ್ಕೂ ಅಸತ್ಯವನ್ನು ತ್ಯಜಿಸುವುದಕ್ಕೂ ಸದಾ ಸಿದ್ಧರಿರಬೇಕು.
೫. ಎಲ್ಲಾ...