This is Forum for discussion.

ಆರ್ಯ

Thanks for visiting this blog.

2011-11-13

ಹತ್ತು ಸತ್ಯ ನಿಯಮಗಳು

. ಎಲ್ಲಾ ಸತ್ಯವಿದ್ಯೆಗಳಿಗೂ ಮತ್ತು ಪದಾರ್ಥ ವಿದ್ಯೆಯಿಂದ ತಿಳಿಯಲ್ಪಡುವ ಸರ್ವಕ್ಕೂ ಪರಮಾತ್ಮನೇ ಆದಿಮೂಲನು.

೨. ಪರಮಾತ್ಮನು ಸಚ್ಚಿದಾನಂದ ಸ್ವರೂಪನೂ, ನಿರಾಕಾರನೂ, ಸರ್ವಶಕ್ತನೂ, ನ್ಯಾಯಕಾರಿಯೂ, ದಯಾಳುವೂ, ಅಜನ್ಮನೂ, ಅನಂತನೂ, ನಿರ್ವಿಕಾರನೂ, ಅನಾದಿಯೂ, ಅನುಪಮನೂ, ಸರ್ವಾಧಾರನೂ, ಸರ್ವೇಶ್ವರನೂ, ಅಜರನೂ, ಸರ್ವಾಂತರ್ಯಾಮಿಯೂ, ಅಮರನೂ, ಅಭಯನೂ, ನಿತ್ಯನೂ, ಪವಿತ್ರನೂ, ಸೃಷ್ಟಿಕರ್ತನೂ ಆಗಿದ್ದಾನೆ. ಕೇವಲ ಅವನ ಉಪಾಸನೆಯನ್ನು ಮಾಡುವುದು ಯೋಗ್ಯ.

೩. ವೇದವು ಸಮಸ್ತ ಸತ್ಯವಿದ್ಯೆಗಳ ಪುಸ್ತಕವು. ಅವುಗಳನ್ನು ಓದುವುದೂ, ಓದಿಸುವುದೂ, ಕೇಳುವುದೂ, ಹೇಳುವುದೂ ಆರ್ಯರೆಲ್ಲರ ಪರಮ ಧರ್ಮ.

೪. ಸತ್ಯವನ್ನು ಗ್ರಹಿಸುವುದಕ್ಕೂ ಅಸತ್ಯವನ್ನು ತ್ಯಜಿಸುವುದಕ್ಕೂ ಸದಾ ಸಿದ್ಧರಿರಬೇಕು.

೫. ಎಲ್ಲಾ ಕಾರ್ಯಗಳನ್ನು ಧರ್ಮಾನುಸಾರವಾಗಿ ಎಂದರೆ ಸತ್ಯಾಸತ್ಯ ವಿವೇಚನೆ ಮಾಡಿ ಆಚರಿಸಬೇಕು.

೬. ಜಗತ್ತಿನ ಉಪಕಾರವನ್ನು ಅಂದರೆ ಸರ್ವರ ಶಾರೀರಿಕ, ಆತ್ಮಿಕ ಮತ್ತು ಸಾಮಾಜಿಕ ಉನ್ನತಿಯನ್ನು ಸಾಧಿಸುವುದೇ ಮುಖ್ಯ ಉದ್ದೇಶ.

೭. ಎಲ್ಲರೊಂದಿಗೆ ಪ್ರೀತಿಪೂರ್ವಕವಾಗಿ ಧರ್ಮಾನುಸಾರವಾಗಿ ಅವರವರ ಯೊಗ್ಯತೆಗೆ ತಕ್ಕಂತೆ ವರ್ತಿಸಬೇಕು.

೮. ಅವಿದ್ಯೆಯ ನಾಶವನ್ನೂ , ವಿದ್ಯೆಯ ಅಭಿವೃದ್ಧಿಯನ್ನೂ ಸಾಧಿಸಬೇಕು.

೯. ಕೇವಲ ತನ್ನ ಉನ್ನತಿಯಿಂದ ಯಾರೂ ಸಂತುಷ್ಟನಾಗಬಾರದು. ಆದರೆ, ಸರ್ವರ ಉನ್ನತಿಯೆಲ್ಲಿಯೇ ತನ್ನ ಉನ್ನತಿಯು ಸಮಾಹಿತವಾಗಿದೆಯೆಂದು ತಿಳಿಯಬೇಕು.

೧೦. ಸಾಮಾಜಿಕ ಸರ್ವಹಿತಕಾರಿ ನಿಯಮಗಳ ಪಾಲನೆಯಲ್ಲಿ ಮಾನವರೆಲ್ಲರೂ ಪರತಂತ್ರರಾಗಿರಬೇಕು ಮತ್ತು ವೈಯಕ್ತಿಕ ಹಿತಕಾರಿ ನಿಯಮದ ವಿಷಯದಲ್ಲಿ ಸರ್ವರೂ ಸ್ವತಂತ್ರರಾಗಿರಬೇಕು.

2011-11-08

ದೇವರೆಂದರೇನು? ಅವನಾರು ಮತ್ತು ಅವನೆಲ್ಲಿರುವನು?

ದೇವರು ಅಥವಾ ಭಗವಂತನು ಅಮರ, ಚೇತನನು, ನಿರಾಕಾರನು ಮತ್ತು ಸರ್ವವ್ಯಾಪಕನಾಗಿದ್ದು ಈ ಜಗತ್ತಿನ ಸೃಷ್ಟಿಕರ್ತನಾಗಿದ್ದಾನೆ. ಅವನು ಸಚ್ಚಿದಾನಂದನು(ಸತ್+ಚಿತ್+ಆನಂದ), ಪವಿತ್ರನೂ, ಸರ್ವತಂತ್ರ ಸ್ವತಂತ್ರನೂ, ಅವನು ಎಲ್ಲರಿಗಿಂತಲೂ ಬಲಶಾಲಿಯೂ ಆದ್ದರಿಂದ ಅವನು ಸರ್ವಶಕ್ತನು. ಅವನಿಗೆ ಕೊನೆಯಿಲ್ಲ. ಅಗಣಿತ ಜೀವಾತ್ಮರುಗಳು ಮತ್ತು ಸೃಷ್ಟಿಗಳು ಅವನಲ್ಲಿ ನೆಲೆಸಿವೆ ಮತ್ತು ಭಗವಂತನೂ ಅವುಗಳಲ್ಲಿ ನೆಲೆಸಿದ್ದಾನೆ. ಈ ಜಗತ್ತಿನಲ್ಲಿ ಅವನಿಲ್ಲದೆ ಇರುವ ರಿಕ್ತ ತಾಣಗಳು ಇಲ್ಲ. 


ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ|(ಯಜು-೪೦.೫.)

ಯಾರ ಗುಣ, ಸ್ವಭಾವ, ಕರ್ಮಗಳು ಕೇವಲ ಸತ್ಯದ ಮೇಲೆ ನಿಂತಿದೆಯೋ ಅವನನ್ನು ಪರಮಾತ್ಮನೆಂದು ಕರೆಯುತ್ತಾರೆ. ಅವನಿಲ್ಲದ ಒಂದು ಕ್ಷಣವೂ ಇಲ್ಲ. ಪರಮಾತ್ಮನು ಸರ್ವಜ್ಞಾನಿಯೂ, ಸರ್ವವ್ಯಾಪಿಯೂ ಮತ್ತು ಅಮರನೂ ಆಗಿದ್ದಾನೆ. ಅವನಿಗೆ ಆದಿ, ಅಂತ್ಯಗಳಿಲ್ಲ. ಅವನು ಗುಣದಲ್ಲಿ ಅಕ್ಷಯನೂ, ಜ್ಞೇಯನೂ, ಆನಂದನೂ, ಪವಿತ್ರನೂ, ನ್ಯಾಯಕಾರಿಯೂ, ದಯಾಳುವೂ,ಅಜನ್ಮನೂ,ಅಪರಿವರ್ತನೀಯನೂ, ಅನುಪಮನೂ ಇತ್ಯಾದಿ ಆಗಿದ್ದಾನೆ.
ಜನ್ಮಾದ್ಯಸ್ಯ ಯತಃ ||(ವೇದಾಂತ.೧.೧.೨.) ಅಂದರೆ, ಯಾರು ಈ ಬ್ರಹ್ಮಾಂಡದ ಸೃಷ್ಟಿಕರ್ತನು, ಪಾಲಕನು ಮತ್ತು ಲಯಕಾರಿಯು ಆಗಿದ್ದಾನೋ ಅವನನ್ನು ತಿಳಿಯಲರ್ಹನೆಂದು ಅರ್ಥಾತ್ ಭಗವಂತನೆಂದು ಕರೆಯುತ್ತಾರೆ.

ಕ್ಲೇಶಕರ್ಮ ವಿಪಾಕಾಶಯೈರಪರಾಮೃಷ್ಟಃ ಪುರುಷ ವಿಶೇಷ ಈಶ್ವರಃ|(ಯೋಗದರ್ಶನ)
ಅಂದರೆ

, ಯಾವನು ಅವಿದ್ಯೆ ಮೊದಲಾದ ಕ್ಲೇಶಗಳು, ಕುಶಲ-ಅಕುಶಲಗಳು,ಇಷ್ಟ-ಅನಿಷ್ಟ ಮತ್ತು ಮಿಶ್ರಫಲಗಳನ್ನು ಕೊಡುವ ಕರ್ಮಗಳ ವಾಸನೆಯಿಂದ ರಹಿತನಾಗಿದ್ದಾನೋ ಅವನೇ ಸಮಸ್ತ ಜೀವರಿಗಿಂತಲೂ ವಿಶೇಷವಾಗಿರುವ "ಈಶ್ವರ"ನೆನಿಸುತ್ತಾನೆ.
ಪರಮಾತ್ಮನು ದಯಾಳುವು ಮತ್ತು ನಿರ್ಭೀಕನು. ಅವನ ಕಾರ್ಯಗಳಲ್ಲಿ ಈ ಅಭೂತಪೂರ್ವ ರಚನಾ ಕೌಶಲ್ಯವನ್ನೊಳಗೊಂಡ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯ ಹಾಗೂ ಜೀವಿಗಳಿಗೆ ಅವರ ಕರ್ಮಕ್ಕೆ ತಕ್ಕಂತೆ ಫಲಾಫಲಗಳನ್ನೀಯುವ ಕಾರ್ಯಗಳು ಸೇರಿರುತ್ತವೆ.
ವಿಶ್ವದ ಬಹುದೊಡ್ಡ ತತ್ವಜ್ಞಾನಿಗಳು – ಈ ಜಗತ್ತಿನಲ್ಲಿ ಒಂದು ವಿಶೇಷವಾದ ಶಕ್ತಿ, ಅದನ್ನು ದೇವರೆಂದೋ ಅಥವಾ ಶ್ರೇಷ್ಠವೆಂದೋ ಕರೆಯಲ್ಪಡುವ ಒಂದು ವಿಶೇಷವಾದ ಪದಾರ್ಥವಿದೆ ಎಂದು ಒಪ್ಪಿದ್ದಾರೆ.

*************************************************************************************************************


ªÀÄÆ® : ªÀÄzÀ£ï gÀºÉÃd
PÀ£ÀßqÀPÉÌ : DAiÀÄð«ÃgÀ
(Source: VedaTaranga - kannada monthly magazine)

Share

Twitter Delicious Facebook Digg Stumbleupon Favorites More