2012-08-10

ಕಲ್ಲು ದೇವರಲ್ಲ , ಆದರೆ ಗೋಡೆ ಮಾತ್ರ ದೇವರು!

/* Based on a real incident in my life.
Names are changed to hide the identity and also as a measure of security. */

ಆಗ ತಾನೇ ಐ.ಟಿ ಕಂಪನಿಗೆ  ಕೆಲಸಕ್ಕೆ ಸೇರಿಕೊಂಡ ನಾನು, ನನ್ನ ಮಿತ್ರರಾದ ಬಾಗೂರಪ್ಪ ಅವರ ಸಲಹೆ ಕೇಳಲು ಹೋದೆನು. ಅವರು ಐ.ಟಿ. ಯಲ್ಲಿ ಬಾಳಬೇಕಾದರೆ ನೀನು "ಯಾರೇ ಏನೇ ಕೇಳಿದರೂ ಒಂದಕ್ಕೆ ಹತ್ತರಷ್ಟು ಸೇರಿಸಿ ಹೇಳು" ಎಂದು ಬೋಧಿಸಿದ್ದರು. Training ಮುಗಿದ ನಂತರ Project selectionಗಾಗಿ ಬಂದವರು ನನ್ನ ಜೊತೆ ಟ್ರೈನಿಂಗ್ ಗೆ  ಬಂದಿದ್ದ ಎಲ್ಲಾ ಮಿತ್ರರನ್ನೂ ಒಂದೊಂದು ಪ್ರಾಜೆಕ್ಟ್ ಗಾಗಿ select ಮಾಡಿಕೊಂಡು ಹೋದರು. ಆದರೆ ನನ್ನ ಹಾಗು ನನ್ನ ಮಿತ್ರ ಮಂಜಪ್ಪ ಅವರನ್ನು ಮಾತ್ರ ಯಾರೂ ಸೇರಿಸಿಕೊಳ್ಳಲಿಲ್ಲ.

ಕಡೆಯದಾಗಿ ಒಬ್ಬರು ಅವರ ಪ್ರಾಜೆಕ್ಟ್ ಗಾಗಿ ಸೇರಿಸಿಕೊಳ್ಳಲು ಬಂದರು. ನನ್ನ ಹಾಗು ಮಂಜಪ್ಪನವರನ್ನು ಕರೆದು ಪರಿಚಯ ಮಾಡಿಕೊಂಡರು. ಅವರು ತಮ್ಮ ಹೆಸರು "ನೂರ್ ಅಹಮದ್" ಅಂತ ಹೇಳಿದರು. "ನಿನ್ನ ಹೆಸರು ಹೇಳು?" ಎಂದು ಅವರು ಕೇಳಿದಾಗ ನನಗೆ ನನ್ನ ಮಿತ್ರ ಬಾಗೂರಪ್ಪನವರು ನೀಡಿದ ಸಲಹೆ ನೆನಪಾಯಿತು . ಎಲ್ಲದಕ್ಕೂ  ಹತ್ತರಷ್ಟು ಸೇರಿಸಿ ಹೇಳು ಎಂದಿದ್ದು ನೆನಪಾಗಿ "ಈತ ನೂರ್ ಅಂದರೆ ನಾವು ಅದಕ್ಕೆ ಹತ್ತರಷ್ಟು ಸೇರಿಸಿ ಸಹಸ್ರ ಲೆಕ್ಕದಲ್ಲಿ ಹೇಳೋಣ ಎಂದು ಲೆಕ್ಕಾಚಾರ ಮಾಡಿ , ಸಾಬ್ರೆ ನನ್ನ ಹೆಸರು ಸಹಸ್ರಾಕ್ಷ ಎಂದೆನು." ಇದನ್ನು ಗಮನಿಸಿದ ನನ್ನ ಮಿತ್ರ ಮಂಜಪ್ಪ ನಾನೇನು ಕಮ್ಮಿ ಎಂದು "ಸಾಬ್ರೆ ನನ್ನ ಹೆಸರು ಅನಂತ ಕೋಟಿ ನಾರಾಯಣ" ಎಂದು ನುಡಿದರು. ಅದಕ್ಕೆ ನೂರ್ ಅಹಮದ್ ಅವರು ನುಸುನಗುತ್ತ "ನಿಮ್ಮಿಬ್ಬರನ್ನು ನಮ್ಮ ಪ್ರಾಜೆಕ್ಟ್ ಗೆ ಆಯ್ಕೆ ಮಾಡಿರುವೆ . ಬಂದು ಸೇರಿಕೊಳ್ಳಿ" ಎಂದರು .
ಮರುದಿನ ಅವರ ಬಳಿ ಹೋದಾಗ ಅವರು ಸ್ವಲ್ಪ ಕಾಲದವರೆಗೂ ನಾವು ಯಾವ ರೀತಿ ಕಾರ್ಯ ನಿರ್ವಹಿಸಬೇಕೆಂದು ಕಲಿಸಿಕೊಟ್ಟರು. ಹೀಗೆಯೇ ಸ್ವಲ್ಪ ದಿನಗಳು ಕಳೆದವು. ದಿನಗಳೆಯುತ್ತಾ ಹೋದಂತೆ ನೂರ್ ಅಹಮದ್ ಅವರು ಒಬ್ಬ ಮತಾಂಧ ವಾಹಬಿ ಮುಸಲ್ಮಾನ ಎಂಬುದು ನಮ್ಮ ಅರಿವಿಗೆ ಬಂದಿತು . ನನ್ನ ಮಿತ್ರ ಮಂಜಪ್ಪನವರೂ ಹಿಂದುತ್ವವಾದಿಗಳು, ಆದರೆ ಅವರು ನೂರ್ ಸಾಬ್ರಷ್ಟು ಮತಾಂಧರಲ್ಲ. ನೂರ್ ಅಹಮದ್ ಅವರು ತಮ್ಮ ಮುಲ್ಲಾ ಅಯೋತುಲ್ಲ ಖಾನ್ ಸಾಬರ ಮಾತನ್ನು ಶತಪ್ರತಿಶತ ನಂಬಿದ್ದರು. ಅವರ ಪ್ರಕಾರ ಇಡೀ ಭೂಮಿಯಲ್ಲಿ ಎಲ್ಲರೂ ಮುಸಲ್ಮಾನರಾದಾಗಲೇ ಅವರಿಗೆ ಸ್ವರ್ಗ ಸಿಗುವುದು. ಅದಕ್ಕಾಗಿ ಬೇರೆ ಮತದವರನ್ನು ತಮ್ಮ ಮತಕ್ಕೆ ಮತಾಂತರ ನಡೆಸಬೇಕು, ಇಲ್ಲವಾದರೆ ಆಗಾಗ ಅಲ್ಲಿ-ಇಲ್ಲಿ ಪಟಾಕಿ ಸಿಡಿಸಿ ಇತರ ಧರ್ಮದವರ ಜನಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂಬುದಾಗಿತ್ತು. ಅವರು ಎಂತಹ ಮತಾಂಧರೆಂದರೆ ಬಿನ್ ಲಾಡೆನ್ ಸತ್ತ ದಿನ ಒಬ್ಬ ಮಹಾನ್ ಸೇವಕ ಸತ್ತು ಹೋದ ಎಂದು ಕಾಫಿರರನ್ನು ಶಪಿಸುತ್ತಾ ಗೋಳಾಡಿದ್ದರು.
ಇಂತಹ ಮತಾಂಧ ನೂರ್ ಸಾಬರು ಒಂದು ದಿನ  ಮಂಜಪ್ಪನವರನ್ನು "ನೀವು ಯಾಕೆ ನಿರ್ಜೀವ ಕಲ್ಲನ್ನು ಪೂಜಿಸುತ್ತೀರಾ" ಎಂದು ಕೇಳಿಬಿಟ್ಟರು. ಇದಕ್ಕೆ ಕುಪಿತಗೊಂಡ ಮಂಜಪ್ಪನವರು "ನೀವು ಪೂಜಿಸುವ ಗೋಡೆಗೆ  ಮಾತ್ರ ಜೀವವಿರುವುದೇ? ಕಲ್ಲು ದೇವರಲ್ಲ ಎಂದರೆ ಗೋಡೆ ಮಾತ್ರ ದೇವರೇ ?" ಎಂದುಬಿಟ್ಟರು. ಅವರಿಬ್ಬರ ವಾದ-ವಿವಾದ ಅತಿರೇಖವನ್ನೂ ಮೀರಿತ್ತು.. ಮಂಜಪ್ಪನವರು ಕ್ರಿಸ್ತರು, ಮುಸಲ್ಮಾನರು ನಂಬಿರುವ "Mother Mary" ತಮ್ಮ ಗ್ರಾಮ ದೇವತೆಯಾದ "ಮಾರಿ ಅಮ್ಮ" ಅವರೇ ಎಂದು ಎಲ್ಲಿಂದಲೋ ಎಲ್ಲಿಗೋ link ಕೊಟ್ಟು ಹಾಸ್ಯಸ್ಪದವೆನಿಸಿಕೊಂಡರು. ಮಂಜಪ್ಪನವರು ನೂರ್ ಅವರಿಗೆ "ನೀವು ಜನರನ್ನು ಕೊಂದರೆ ಸ್ವರ್ಗ ಸಿಗುವುದು ಎಂದು ನಂಬುತ್ತೀರಲ್ಲ ಅದು ಎಷ್ಟರ ಮಟ್ಟಿಗೆ ಸರಿ?" ಎಂದು ಕೇಳಿದರು. ಅದಕ್ಕೆ ಆ ಮತಾಂಧ ನೂರ್ ಅಹಮದ್ ಇದು ನಿಜಕ್ಕೂ ಸತ್ಯವೆಂದು ಅದಕ್ಕೆ ಸಮರ್ಥನೆ ನೀಡಿದರು.
ನೂರ್ ಸಾಬರು ಈ ರೀತಿ ನುಡಿದರು: " ನಮ್ಮ ಅಜ್ಮಲ್ ಕಸಬ್ ಕಾಫಿರರನ್ನು ಕೊಂದನು. ಅದಕ್ಕೆ ಅವನಿಗೆ ಸಿಗಬೇಕಾದ ಬಹುಮಾನ ಸ್ವರ್ಗಸುಖ.ಅದು ಅವನಿಗೆ ಭಾರತದಲ್ಲೇ ಸಿಗುವಂತೆ ನಮ್ಮ ದೇವರು ಮಾಡಿದ್ದಾನೆ.ಇದೇ ನಮ್ಮ ನಂಬಿಕೆಯನ್ನು ಇನ್ನಷ್ಟು ಬಲವಾಗಿಸಿದೆ.ಆತನಿಗೆ ಸಿಗಬೇಕಾದ ಎಲ್ಲ ರಾಜ ಮರ್ಯಾದೆ ಈ ಕಾಫಿರರ ನಾಡಿನಲ್ಲೇ ಸಿಗುವಂತೆ ಮಾಡಿರುವ ನಮ್ಮ ದೇವರ ಶಕ್ತಿ ಅಪಾರ" ಎಂದರು.

ಆ ಮಾತಿಗೆ ಉತ್ತರವಿಲ್ಲದೆ ಹೋದಾಗ ಮಂಜಪ್ಪನವರು "ಅದು ಏನೇ ಇರಲಿ ನಮ್ಮ ದೇವರೇ ಶ್ರೇಷ್ಟರು" ಎಂದರು . ಇದಕ್ಕೆ ಪ್ರತಿಯಾಗಿ ಅಹಮದ್ ಅವರು ನಮ್ಮ ದೇವರೇ ದೊಡ್ಡವರು ಎಂದರು . ಅಲ್ಲಿಯೇ ಇದ್ದ ಜಾನ್ ಅವರು "ನಮ್ಮ ದೇವರೇ ನಿಜವಾದ ದೇವರು" ಎಂದರು. ಈ ಮೂರು ಜನ ನಮ್ಮ ದೇವರೇ ಶ್ರೇಷ್ಟ ಎಂದು ಜಗಳವಾಡಿ, ಅಲ್ಲಿ ಕೋಮು ಗಲಭೆ ಎದ್ದಿರುವುದನ್ನು ಗಮನಿಸಿ ನನ್ನ ಆಪ್ತಮಿತ್ರರಾದ ಸಚಿನ್ ಅವರನ್ನು ಕರೆದೆನು. ಸಚಿನ್ ಅವರು ಎಂತಹ dangerous situation  ಕೂಡ handle ಮಾಡುವ ಚಾಣಾಕ್ಷ. ಅವರು ಈ ಮೂವರ ಜಗಳ ನಿಲ್ಲಿಸಲು ಹೋದಾಗ, "ಮೂವರು ಸೇರಿ ಯಾರು ನಿಜವಾದ ದೇವರು ಎಂದು ಕೇಳಿದರು ? " . ಅದಕ್ಕೆ ಸಚಿನ್ ಅವರು "ನಾನೇ ದೇವರು" ಎಂದರು . ಇದನ್ನು prove ಮಾಡುವಂತೆ ಆ ಮೂವರು ಕೇಳಿದಾಗ ಸಚಿನ್ ಅವರು "ನೀವೆಲ್ಲರೂ ಒಬ್ಬೊಬ್ಬರಾಗಿ ನಿಮ್ಮ ನಿಮ್ಮ ದೇವರನ್ನು ಪ್ರಾರ್ಥಿಸಿ ಈ ಕ್ಷಣವೇ ಮಳೆ ಬರುವಂತೆ ಕೇಳಿಕೋಳ್ಳಿರೀ" ಎಂದರು. ಮೊದಲು ನೂರ್ ಸಾಬರು ದುವಾ ಮಾಡಿಕೊಂಡರು;ಆದರೆ ಮಳೆ ಬರಲಿಲ್ಲ. ನಂತರ ಜಾನ್ pray ಮಾಡಿದರು;ಆಗಲೂ ಮಳೆ ಬರಲಿಲ್ಲ. ನಂತರ ಮಂಜಪ್ಪನವರು ತಮ್ಮ ದೇವರನ್ನು ಪ್ರಾರ್ಥಿಸಿದರು;ಆಗಲೂ ಮಳೆ ಬರಲಿಲ್ಲ .
ಆಗ ಸಚಿನ್ ಅವರು "ಈಗ ನೀವು ಮೂವರು ಸೇರಿ ನನ್ನನು ಮಳೆ ಬರುವಂತೆ ಮಾಡಲು ಪ್ರಾರ್ಥಿಸಿ" ಎಂದರು. ಮೂವರೂ ಸಚಿನ್ ಅವರನ್ನೂ ಪ್ರಾರ್ಥಿಸಿದರು.ಆಶ್ಚರ್ಯವೆಂದರೆ ಆಗಲೂ ಮಳೆ ಬರಲಿಲ್ಲ. ಅದಕ್ಕೆ ಸಚಿನ್ ಅವರು " ಈ Experiment ಇಂದ ನಮಗೆ ತಿಳಿಯುವುದೇನೆಂದರೆ ಅವರೂ ಮಳೆ ಬರಿಸಲಿಲ್ಲ , ನಾನೂ ಮಳೆ ಬರಿಸಲಿಲ್ಲ. ಆದ ಕಾರಣ ಅವರೂ ದೇವರು , ನಾನೂ ದೇವರು.ಇದನ್ನೇ ನಾವು ಅಹಂ ಬ್ರಹ್ಮಾಸ್ಮಿ ಎನ್ನುತ್ತೇವೆ " ಎಂದು ಎಲ್ಲರನ್ನೂ ಸಮಾಧಾನ ಪಡಿಸಿ ಅಲ್ಲಿ ಕೋಮು ಸೌಹಾರ್ದವನ್ನು ತಂದರು.
ಇದಾದ ನಂತರ ಎಲ್ಲರೂ ಸುಮ್ಮನೇ ಇರುವುದನ್ನು ಕಂಡು ವಿಷಯ ತಣ್ಣಗಾಗಿದೆ ಎಂದು ಅರಿತ ನಾನು, ಮಂಜಪ್ಪನವರಿಗೆ "ರೀ ಮಂಜಪ್ಪನವರೆ. ಬನ್ನಿ ಕಾಫಿ ಕುಡಿಯೋಣ." ಎಂದೆನು. ದಿನವೂ ಮಂಜಪ್ಪನವರ ದುಡ್ದಲ್ಲೇ ಓಸಿ ಕಾಫಿ ಕುಡಿಯೋ
ನನ್ನ ಜಾಯಮಾನವನ್ನು ಅರಿತ ಮಂಜಪ್ಪನವರು ಅದರಿಂದ ತಪ್ಪಿಸಿಕೊಳ್ಳಲು "ನಮ್ಮ ಮನೆಯಲ್ಲಿ ಯಾರೋ ನೆಂಟರು ಹೋಗಿಬಿಟ್ಟಿದ್ದಾರೆ. ಅದರ ಸೂತಕ ಇದೆ. ನೀವು separate ಆಗಿ ಹೋಗಿ" ಎಂದು ಜಾರಿಕೊಳ್ಳಲು ನೋಡಿದರು. ಅವರು ರಂಗೋಲಿ ಕೆಳಗೆ ತೂರಿದರೆ,ನಾನು ಮೋರಿ ಕೆಳಗೆ ತೂರುವವನಲ್ಲವೇ? ನಾನು ಮಂಜಪ್ಪನವರಿಗೆ "ಮಂಜಪ್ಪನವರೇ ಈ ಸೂತಕ ಎಲ್ಲ ನಮಗಿಲ್ಲ. ದೇವರು ನಮ್ಮೆಲ್ಲರ ಆಪ್ತ ಬಂಧು(ನೆಂಟ) ಎನ್ನುವರು. ಅವನು ನಮ್ಮ ಪಾಲಿಗೆ ಎಂದೋ ಸತ್ತು ಹೋದ. ಅದರ ಸೂತಕವೇ ನಮಗಿಲ್ಲ ಎಂದ ಮೇಲೆ , ಇವು ಯಾವ ಲೆಕ್ಕಾ ? ಬನ್ನಿ ಕಾಫಿ ಕುಡಿಯೋಣ" ಎಂದು ಬಲವಂತವಾಗಿ ಕರೆದೆನು. ಅದಕ್ಕೆ ಮಂಜಪ್ಪನವರು "ದೇವರು ಇದ್ದಾನೋ?ಇಲ್ಲವೋ?ಅದು ಮುಖ್ಯವಲ್ಲ. ಅವನು ನಮ್ಮ ಪಾಲಿಗೆ ಇದ್ದಾನಾ ಎಂಬುದಷ್ಟೇ ಮುಖ್ಯ ಈ ಚಾಂಡಾಲನಿಗೆ" ಎಂದು ಮನಸ್ಸಿನಲ್ಲಿಯೇ  ಮಂತ್ರೋಚ್ಚಾರಣೆ ಮಾಡಿಕೊಂಡರು.

1 comments:

Hotels near Casino Rittenham - MapyRO
Hotels 1 - 12 양산 출장안마 of 62 — Looking 평택 출장안마 for 천안 출장샵 hotels near 남원 출장샵 Casino Rittenham? 김천 출장마사지 Compare reviews and find deals near Casino Rittenham, the most reliable place to stay

Post a Comment

Share

Twitter Delicious Facebook Digg Stumbleupon Favorites More